ಗನ್ ಹಿಡಿದು ಅಂಗಡಿಗೆ ನುಗ್ಗಿದ ಕಳ್ಳನಿಗೆ ಸಖತ್ ಎದಿರೇಟು ನೀಡಿದ ಮಾಲೀಕ.. ವಿಡಿಯೋ - ಹರಿಯಾಣ ಇತ್ತೀಚಿನ ನ್ಯೂಸ್
ಹರಿಯಾಣ: ಕೈಯಲ್ಲಿ ಗನ್ ಹಿಡಿದು ಕಳ್ಳನೋರ್ವ ಅಂಗಡಿಗೆ ನುಗ್ಗಿ ಬೆದರಿಕೆ ಹಾಕಲು ಮುಂದಾಗುತ್ತಿದ್ದಂತೆ ಮಾಲೀಕ ಆತನಿಗೆ ಸಖತ್ ಆಗಿ ತಿರುಗೇಟು ನೀಡಿದ್ದು, ತಕ್ಷಣವೇ ಪಿಸ್ತೂಲ್ ತೆಗೆದು ಆತನ ಮೇಲೆ ಗುಂಡು ಹಾರಿಸಿದ್ದಾನೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ್ಮರಕ್ಷಣೆಗಾಗಿ ತಾನು ಗುಂಡು ಹಾರಿಸಿರುವುದಾಗಿ ಅಂಗಡಿ ಮಾಲೀಕ ಹೇಳಿಕೊಂಡಿದ್ದಾನೆ.