ಜನಸಾಮಾನ್ಯರ ಸುಲಿಗೆ ಮಾಡಲು ಇಂಧನ ತೆರಿಗೆ ಹೆಚ್ಚಳ: ಕೇಂದ್ರದ ವಿರುದ್ಧ ತರೂರ್ ವಾಗ್ದಾಳಿ - ತೈಲ ಬೆಲೆ ಏರಿಕೆ ವಿರುದ್ಧ ತರೂರ್ ವಾಗ್ದಾಳಿ
ತಿರುವನಂತಪುರಂ(ಕೇರಳ): ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್ನ ಶಶಿ ತರೂರ್ ಕೂಡ ಇದರಲ್ಲಿ ಭಾಗಿಯಾದರು. ಕೇರಳದ ತಿರುವನಂತಪುರಂನಲ್ಲಿ ಆಟೋ ಚಾಲಕರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನಸಾಮಾನ್ಯರ ಸುಲಿಗೆ ಮಾಡುವ ಉದ್ದೇಶದಿಂದ ಇಂಧನ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದರು. ಭಾರತೀಯರು ಇಂಧನದ ಮೇಲೆ ಶೇ.260ರಷ್ಟು ತೆರಿಗೆ ಹಾಕಿದೆ. ಆದರೆ, ಅಮೆರಿಕದಲ್ಲಿ ಇದು ಕೇವಲ ಶೇ.20ರಷ್ಟು ಇದೆ ಎಂದು ಅವರು ಹೇಳಿದರು.