WATCH: ಮಾಸ್ಕ್ ಇಲ್ಲದೆ ಮಸ್ತಿ ಮಾಡಿದ್ರೆ ರಸ್ತೆಯಲ್ಲೇ ಬಸ್ಕಿ ಶಿಕ್ಷೆ - ಕೋವಿಡ್ ನಿರ್ಬಂಧ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ ಮಧ್ಯಪ್ರದೇಶ ಪೊಲೀಸರು
ಮಧ್ಯಪ್ರದೇಶ: ದೇಶಾದ್ಯಂತ ಕೋವಿಡ್ ಎರಡನೇ ಅಲೆ ಭಾರಿ ಆತಂಕ ಮೂಡಿಸಿದ್ದರೂ ಕೆಲವರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡದೇ ಕೊರೊನಾ ನಿಯಮ ಉಲ್ಲಂಘಿಸುತ್ತಿದ್ದಾರೆ. ಸರ್ಕಾರ ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಜನ ಮಾತ್ರ ಕೊರೊನಾ ನಿಯಮ ಪಾಲಿಸುತ್ತಿಲ್ಲ. ಅಂಥವರಿಗೆ ಎಂಪಿ ಪೊಲೀಸರು ತಕ್ಕ ಪಾಠ ಕಲಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ರಾತ್ರಿ ಸುಮ್ಮನೆ ತಿರುಗುತ್ತಿದ್ದವರನ್ನು ತಡೆದು ರಸ್ತೆಯಲ್ಲಿಯೇ ಬಸ್ಕಿ ಹೊಡೆಸಿದ್ದಾರೆ. ರಾಜ್ಯದಲ್ಲಿ ಶನಿವಾರ 12,918 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.