ಮಧುರೈನಲ್ಲಿ 2000 ವರ್ಷ ಹಳೆಯ ಶಾಸನ ಪತ್ತೆ: ವಿಡಿಯೋ - ತಮಿಳುನಾಡು ಶಾಸನ ಸುದ್ದಿ
ಮಧುರೈ: ಇಲ್ಲಿನ ಉಸಿಲಂಪಟ್ಟಿಯ ಸೀಲಕರಿಯಾಮನ್ ದೇವಸ್ಥಾನದ ಬಳಿ 2000 ವರ್ಷಗಳಷ್ಟು ಹಳೆಯದಾದ ಶಾಸನ ಕಂಡುಬಂದಿದೆ. ಶಾಸನಗಳನ್ನು ಪುರಾತತ್ವ ಇಲಾಖೆಯ ತಜ್ಞರು ಮತ್ತು ಇತಿಹಾಸಕಾರರ ತಂಡವು ಗುರುತಿಸಿದೆ. ಶಾಸನದ ಮೇಲೆ ಮುದ್ರಿತ ಅಕ್ಷರಗಳನ್ನು ಸ್ಪಷ್ಟ ಅಧ್ಯಯನದ ನಂತರ ಗುರುತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಈವರೆಗೆ 40 ಶಾಸನಗಳು ದೊರೆತಿವೆ. ಅದರಲ್ಲಿ ಮಧುರೈನಲ್ಲಿ 20 ಶಾಸನಗಳಿವೆ. ಹೆಚ್ಚಾಗಿ ತಮಿಳಿ (ತಮಿಳು ಬ್ರಾಹ್ಮಿ) ಶಾಸನಗಳು ಜೈನ ಗುಹೆಗಳಲ್ಲಿ ಕಂಡುಬರುತ್ತಿದ್ದವು. ಇನ್ನು ಕಳೆದ ಕೆಲ ವರ್ಷಗಳಿಂದ ತಮಿಳುನಾಡಿನ ಅನೇಕ ಭಾಗದಲ್ಲಿ ತಮಿಳು ಬ್ರಾಹ್ಮಿ ಶಾಸನಗಳು ಕಂಡುಬರುತ್ತಿದ್ದು, ಇದು ಇಲ್ಲಿನ ಜನರು ಬ್ರಾಹ್ಮಿ ಅಕ್ಷರಗಳನ್ನು ಬರೆಯುತ್ತಿದ್ದರು ಎಂಬುದಕ್ಕೆ ಪುರಾವೆಯಾಗಿದೆ.