'ಹೆಲ್ಮೆಟ್' ಹಾಕಿ ಬೈಕ್ ಹಿಂಬದಿ ಕುಳಿತು ನಾಯಿಯ ಜಾಲಿ ರೈಡ್, ವಿಡಿಯೋ ವೈರಲ್! - Dog wearing helmet on bike ride in Chennai
ಚೆನ್ನೈ: ಹೆಲ್ಮೆಟ್ ಹಾಕಿಕೊಂಡು ಬೈಕ್ ಹಿಂಬದಿಯಲ್ಲಿ ಕೂತು, ನಾಯಿಯೊಂದು ತನ್ನ ಒಡೆಯನ ಜೊತೆಗೆ ಬೈಕ್ ಸವಾರಿ ನಡೆಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರನೊಬ್ಬ ಈ ವಿಡಿಯೋವನ್ನು, 'ರಸ್ತೆ ಸುರಕ್ಷತೆಗೆ ತಮಿಳುನಾಡಿನಲ್ಲಿ ಹೆಲ್ಮೆಟ್ ಹಾಕಿದ ನಾಯಿ. ಒಡೆಯನ ಕಾಳಜಿ ನಿಜಕ್ಕೂ ಮೆಚ್ಚುವಂತದ್ದೇ' ಎಂಬ ಅಡಿಬರಹದೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ಕೆಲ ನೆಟ್ಟಿಗರು ಪ್ರಶಂಶಿಸಿದ್ರೆ, ಇನ್ನು ಕೆಲವರು ನಾಯಿಯ ಜೊತೆಗೆ ಈ ರೀತಿ ಬೈಕ್ ಬ್ಯಾಲೆನ್ಸ್ ಮಾಡೋದಾ? ಎಂದು ಪ್ರಶ್ನಿಸಿದ್ದಾರೆ. ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಲೈಕ್ ಹಾಗೂ ಶೇರ್ ಗಿಟ್ಟಿಸಿಕೊಂಡಿದೆ.