ಶಬರಿಮಲೆಯಲ್ಲಿ 'ಮಕರಜ್ಯೋತಿ' ದರ್ಶನ: ಅಯ್ಯಪ್ಪನ ಕಂಡು ಪುಳಕಿತರಾದ ಭಕ್ತಗಣ, ವಿಡಿಯೋ - ಶಬರಿಮಲೆ ಇತ್ತೀಚಿn ಸುದ್ದಿ
ಕೇರಳ (ಪತ್ತನಂತಿಟ್ಟ):ಕೋವಿಡ್ ಪ್ರೋಟೋಕಾಲ್ ಮಧ್ಯೆ, ಈ ವರ್ಷದ ಮಕರ ಜ್ಯೋತಿ ಉತ್ಸವವು ಹೆಚ್ಚಿನ ಜನಸಂದಣಿಯಿಲ್ಲದೇ ನಡೆದಿದೆ. ವರ್ಚುಯಲ್ ಕ್ಯೂ ವ್ಯವಸ್ಥೆಯಲ್ಲಿ ನೋಂದಾಯಿಸಿರುವಂತೆ 5000 ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯದ ಆವರಣದಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಅಯ್ಯಪ್ಪನನ್ನು ತಿರುವಾಭರಣಂಗಳೊಂದಿಗೆ ಸಿಂಗರಿಸಿ ಮಹಾದೀಪಾರಾಧನೆ ಮಾಡಲಾಯಿತು. ಬಳಿಕ ಸಂಜೆ 6.40ರ ಸುಮಾರಿಗೆ ಮಕರ ಜ್ಯೋತಿ ದರ್ಶನವಾಗಿದೆ.