ತಮ್ಮಿಷ್ಟದ ಅಭ್ಯರ್ಥಿಗೆ ಟಿಕೆಟ್ ನೀಡದ ಆಕ್ರೋಶ, ಬಿಜೆಪಿ ಕಚೇರಿ ಧ್ವಂಸ: ವಿಡಿಯೋ - ಪಶ್ಚಿಮ ಬಂಗಾಳ ಎಲೆಕ್ಷನ್
ಮಾಲ್ಡಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ನಿನ್ನೆ 148 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ ಮಾಡಿದೆ. ಆದರೆ ಮಾಲ್ಡಾ ಕ್ಷೇತ್ರಕ್ಕೆ ತಮ್ಮಿಷ್ಟದ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ ಎಂದು ಕಾರ್ಯಕರ್ತರು ಕಚೇರಿ ಧ್ವಂಸಗೊಳಿಸಿದ್ದಾರೆ. ಕಚೇರಿಯಲ್ಲಿನ ಕುರ್ಚಿ, ಧ್ವಜ ಸೇರಿದಂತೆ ಪ್ರಮುಖ ವಸ್ತುಗಳಿಗೆ ಹಾನಿ ಮಾಡಿದ್ದಾರೆ.