ಆಪ್ ಕಾರ್ಯಕರ್ತನಿಗೆ 'ಕೈ' ನಾಯಕಿಯಿಂದ ಕಪಾಳ ಮೋಕ್ಷ ಯತ್ನ... ದೂರು ನೀಡಲು ಮುಂದಾದ ಆಮ್ ಆದ್ಮಿ! - ಆಪ್ ಕಾರ್ಯಕರ್ತನಿಗೆ ಕಪಾಳ ಮೋಕ್ಷ
ದೆಹಲಿ ವಿಧಾನಸಭಾ ಚುನಾವಣೆ ಭರದಿಂದ ನಡೆಯುತ್ತಿದ್ದು, ಈ ಮಧ್ಯೆ ಕೆಲವೊಂದು ಮತಗಟ್ಟೆಗಳಲ್ಲಿ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಂಜು ಕಾ ಟೀ ಪ್ರದೇಶದ ಬಳಿ ಕಾಂಗ್ರೆಸ್ ಮತ್ತು ಆಪ್ ನಡುವೆ ಕಲಹ ನಡೆದಿದ್ದು, ಈ ವೇಳೆ, ಆಪ್ ಕಾರ್ಯಕರ್ತನಿಗೆ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಕಪಾಳ ಮೋಕ್ಷ ಮಾಡಲು ಯತ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. ತಮ್ಮ ಮಗನ ಬಗ್ಗೆ ಮಾತನಾಡಿದ್ದಕ್ಕಾಗಿ ಲಾಂಬಾ ಕಪಾಳಮೋಕ್ಷ ಮಾಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ.
Last Updated : Feb 8, 2020, 12:59 PM IST