ಅಧಿವೇಶನದಲ್ಲಿ ರವಿ ಕಿಶನ್-ಜಯಾ ಬಚ್ಚನ್ ಮಾತಿನ ಸಮರ.. ವಿಡಿಯೋ ನೋಡಿ - ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್
ನವದೆಹಲಿ: ನಿನ್ನೆಯಿಂದ ಸಂಸತ್ ಮುಂಗಾರು ಅಧಿವೇಶನದಲ್ಲಿ ನಟ, ಬಿಜೆಪಿ ಸಂಸದ ರವಿ ಕಿಶನ್ ಹಾಗೂ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನಡುವೆ ಮಾತಿನ ಸಮರ ಜೋರಾಗಿದೆ. ಚಿತ್ರರಂಗದಿಂದಲೇ ಬಂದಂತಹ ಲೋಕಸಭಾ ಸದಸ್ಯರೊಬ್ಬರು ಚಿತ್ರೋದ್ಯಮದ ವಿರುದ್ಧವಾಗಿ ಮಾತನಾಡಿರುವುದು ನಾಚಿಕೆಪಡುವ ವಿಷಯವಾಗಿದೆ ಎಂದು 'ಚಿತ್ರರಂಗದಲ್ಲೂ ಮಾದಕ ವ್ಯಸನವಿದೆ' ಹೇಳಿದ ರವಿ ಕಿಶನ್ ವಿರುದ್ಧ ಜಯಾ ಹರಿಹಾಯ್ದಿದ್ದಾರೆ. ಯಾರ ಬೆಂಬಲವಿಲ್ಲದೆ ನಾನು ಸಿನಿಮಾ ರಂಗದಲ್ಲಿ ಕೆಲಸ ಮಾಡಿರುವುದಾಗಿ ಇತ್ತ ರವಿ ಕಿಶನ್ ಜಯಾ ವಿರುದ್ಧ ಗರಂ ಆಗಿದ್ದಾರೆ. ಹೀಗೆ ಲೋಕಸಭಾ-ರಾಜ್ಯಸಭಾ ಕಲಾಪದಲ್ಲಿ ಇಬ್ಬರ ಮಾತಿನ ಚಕಮಕಿ ಮುಂದುವರೆದಿದೆ.