ಅನಿಲ ಸ್ಫೋಟದಿಂದ ನೂರಾರು ಮಕ್ಕಳು ಅಸ್ವಸ್ಥ... ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ರೋಧನೆ! - ವಿಶಾಖಪಟ್ಟಣಂ ಗ್ಯಾಸ್ ಸೋರಿಕೆ
ವಿಶಾಖಪಟ್ಟಣಂ: ವಿಷಾನಿಲ ಸ್ಫೋಟಗೊಂಡಿರುವ ಕಾರಣ ನೂರಾರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳು ಆಸ್ಪತ್ರೆ ಸೇರಿಕೊಳ್ಳುತ್ತಿದ್ದಂತೆ ಅವರ ರೋಧನೆ ಮುಗಿಲು ಮುಟ್ಟಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದು ಬೆಳಗ್ಗೆ ನಡೆದಿರುವ ಘೋರ ಘಟನೆಯಿಂದ ಈಗಾಗಲೇ ಓರ್ವ ಮಗು ಸಾವನ್ನಪ್ಪಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ.