ಮನಾಲಿ: ಹಿಮದ ಮೇಲೆ ನಿಯಂತ್ರಣ ತಪ್ಪಿ ಜಾರುತ್ತಿರುವ ವಾಹನಗಳು - ವಿಡಿಯೋ ವೈರಲ್ - Manali snow fall
ಕುಲ್ಲು (ಹಿಮಾಚಲ ಪ್ರದೇಶ): ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಕೋವಿಡ್ ಸಾಂಕ್ರಾಮಿಕದ ನಡುವೆಯೂ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಆದರೆ ಅನೇಕ ಪ್ರವಾಸಿಗರ ವಾಹನಗಳು ಹಿಮದಲ್ಲಿ ಸಿಲುಕಿಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡು ಅವರನ್ನು ರಕ್ಷಿಸುತ್ತಿದ್ದಾರೆ. ಮನಾಲಿಯಲ್ಲಿ ಹಿಮದ ಮೇಲೆ ವಾಹನಗಳು ನಿಯಂತ್ರಣ ತಪ್ಪಿ ಜಾರಿ ಹೋಗುತ್ತಿರುವ, ಇತರ ವಾಹನಗಳಿಗೆ ಡಿಕ್ಕಿಯಾಗುತ್ತಿರುವ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.