Watch: ಪ್ರವಾಸಿಗರೊಂದಿಗೆ ಬಿಂದಾಸ್ ಆಟವಾಡಿದ ಚಿರತೆ: ಸೆಲ್ಫಿ ತೆಗೆದು ಖುಷಿ ಪಟ್ಟ ಜನ! - ವಾಹನ ಸವಾರರೊಂದಿಗೆ ಚಿರತೆ ಆಟ
ಕುಲ್ಲು (ಹಿಮಾಚಲ ಪ್ರದೇಶ): ಅರಣ್ಯಗಳಲ್ಲಿ ವಾಸಿಸುವ ನರಭಕ್ಷಕ ಚಿರತೆ ಕೆಲವೊಮ್ಮೆ ಜನ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಚಿರತೆ ಜನರಿಗೆ ಯಾವುದೇ ರೀತಿಯ ತೊಂದರೆ ಮಾಡದೇ ಅವರೊಂದಿಗೆ ಆಟವಾಡಿದೆ. ಹಿಮಾಚಲಪ್ರದೇಶದ ಕುಲ್ಲು ತೀರ್ಥನ್ ಕಣಿವೆಯಲ್ಲಿ ಕುತೂಹಲಕಾರಿ ಘಟನೆ ನಡೆದಿದೆ. ರಸ್ತೆಯ ಮೇಲೆ ಮಲಗಿದ್ದ ಚಿರತೆಯನ್ನು ನೋಡಲು ಪ್ರವಾಸಿಗರು ವಾಹನಗಳಿಂದ ಕೆಳಗಿಳಿದಿದ್ದಾರೆ. ಈ ವೇಳೆ ಕಾಡುಪ್ರಾಣಿ ಯಾವುದೇ ವ್ಯಕ್ತಿಯ ಮೇಲೆ ದಾಳಿ ಮಾಡಿಲ್ಲ. ಆದರೆ ಪ್ರವಾಸಿಗರೊಂದಿಗೆ ಆಟವಾಡಿದೆ. ಅನೇಕರು ಚಿರತೆಯ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಸುಮಾರು 1 ಗಂಟೆಗೂ ಹೆಚ್ಚು ಸಮಯ ಈ ಚಿರತೆ ಜನರೊಂದಿಗೆ ಆಟವಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.