ರೋಗಿಯನ್ನು ಸ್ಟ್ರೆಚರ್ನಲ್ಲಿ ಹೊತ್ತು 15 ಕಿ.ಮೀ ಸಾಗಿ ಆಸ್ಪತ್ರೆ ಸೇರಿಸಿದ ಗ್ರಾಮಸ್ಥರು
ಕುಲ್ಲು/ಲಾಹೌಲ್ ಸ್ಪೀತಿ : ಲಾಹೌಲ್ ಕಣಿವೆಯ ನಂಗಾರ್ ಗ್ರಾಮದ ನಿವಾಸಿ ತಾಶಿ ತಾಂಡೂಪ್ ಗುರುವಾರ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಹಿಮಪಾತದಿಂದಾಗಿ ಮುರಿಂಗ್-ಚೌಖಾಂಗ್-ನಂಗಾರ್ ಸಂಪರ್ಕ ರಸ್ತೆ ಮುಚ್ಚಲ್ಪಟ್ಟಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಅವರನ್ನು ಸ್ಟ್ರೆಚರ್ನಲ್ಲಿರಿಸಿ 15 ಕಿಲೋಮೀಟರ್ ಹೊತ್ತು ಮುಖ್ಯ ರಸ್ತೆಗೆ ಕರೆದೊಯ್ದರು. ಆನಂತರ ರೋಗಿಯನ್ನು ಅಟಲ್ ಟನಲ್ ರೋಹ್ಟಾಂಗ್ ಮೂಲಕ ಪ್ರಾದೇಶಿಕ ಆಸ್ಪತ್ರೆ ಕುಲ್ಲುಗೆ ಕರೆತರುವಲ್ಲಿ ಯಶಸ್ವಿಯಾದರು.
Last Updated : Dec 18, 2020, 1:56 PM IST