ಕೆಲಸದ ವಿಚಾರಕ್ಕೆ ನರ್ಸ್ ಮತ್ತು ವೈದ್ಯನ ನಡುವೆ ಗಲಾಟೆ - ವಿಡಿಯೋ ವೈರಲ್ - ರಾಂಪುರದಲ್ಲಿ ವೈದ್ಯನಿಗೆ ಹೊಡೆದ ನರ್ಸ್
ರಾಂಪುರ (ಉತ್ತರ ಪ್ರದೇಶ): ಕೋವಿಡ್ ಕಾರಣದಿಂದ ವೈದ್ಯಕೀಯ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಈ ಕಾರಣಕ್ಕೆ ಹಲವೆಡೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನಡುವೆ ಆಗಾಗ ಗಲಾಟೆಗಳು ಆಗುತ್ತಲೇ ಇರುತ್ತವೆ. ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಬರ್ವಾಲ್ನ ಆಸ್ಪತ್ರೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಕೆಲಸದ ವಿಚಾರಕ್ಕೆ ನರ್ಸ್ ಮತ್ತು ಹಿರಿಯ ವೈದ್ಯ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣುವಂತೆ, ಮೊದಲಿಗೆ ನರ್ಸ್ ಮತ್ತು ವೈದ್ಯನ ನಡುವೆ ವಾಗ್ವಾದ ನಡೆದು, ನರ್ಸ್ ವೈದ್ಯನ ಕಪಾಳಕ್ಕೆ ಹೊಡೆಯುತ್ತಾಳೆ. ಇದಕ್ಕೆ ಪ್ರತಿಯಾಗಿ ವೈದ್ಯ ಕೂಡ ಆಕೆಗೆ ಹೊಡೆಯಲು ಪ್ರಯತ್ನಿಸುತ್ತಾನೆ. ಈ ವೇಳೆ ಅಲ್ಲೇ ಇದ್ದ ಜನರು ಅವರಿಬ್ಬರನ್ನು ತಡೆಯುತ್ತಾರೆ.