ಮಗು ಇಟ್ಟಿಗೆ ಕಿತ್ತ ವಿಷಯಕ್ಕೆ ಹೊಡೆದಾಡಿಕೊಂಡ ಅಕ್ಕಪಕ್ಕದ ಮನೆಯ ಮಹಿಳೆಯರು... ವಿಡಿಯೋ ವೈರಲ್ - ಅಂಬೇಡ್ಕರ್ ನಗರ ಗಲಾಟೆ ವಿಡಿಯೋ ವೈರಲ್
ಅಂಬೇಡ್ಕರ್ ನಗರ (ಉತ್ತರ ಪ್ರದೇಶ ): ಮಗು ಇಟ್ಟಿಗೆ ಕಿತ್ತ ವಿಷಯಕ್ಕೆ ಅಕ್ಕಪಕ್ಕದ ಮನೆಯ ಮಹಿಳೆಯರು ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಅಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆರ್ಹಾಂಪುರ ಗ್ರಾಮದಲ್ಲಿ ನಡೆದಿದೆ. ಮಗು ಆಡುತ್ತಿರುವಾಗ ಪಕ್ಕದ ಮನೆಯವರ ನಿರ್ಮಾಣ ಹಂತದಲ್ಲಿದ್ದ ಗೋಡೆಯ ಇಟ್ಟಿಗೆ ಕಿತ್ತಿದೆ ಎನ್ನಲಾಗಿದ್ದು, ಈ ವಿಚಾರಕ್ಕೆ ಎರಡು ಕಡೆಯ ಮಹಿಳೆಯರ ಮಧ್ಯೆ ಶುರುವಾದ ವಾಗ್ವಾದ ಕೊನೆಗೆ ಕಲ್ಲು, ದೊಣ್ಣೆಯಿಂದ ಹೊಡೆದಾಡಿಕೊಳ್ಳುವವರೆಗೆ ಹೋಗಿದೆ. ಮಹಿಳೆಯರು, ಮಕ್ಕಳು ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಕುರಿತಂತೆ ಎರಡೂ ಕಡೆಯವರು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಲಾಪುರ ಠಾಣಾ ಮುಖ್ಯಸ್ಥ ಬ್ರಿಜೇಶ್ ಸಿಂಗ್ ಹೇಳಿದ್ದಾರೆ.