Watch: ಬ್ಯಾಟ್ಸ್ಮನ್ ಬಾರಿಸಿದ ಚೆಂಡು ನೇರವಾಗಿ ಬೌಲರ್ ಮುಖಕ್ಕೆ! ಬೆಚ್ಚಿಬೀಳಿಸಿದ ವಿಡಿಯೋ!
ಗಾಜಿಯಾಬಾದ್( ಉತ್ತರಪ್ರದೇಶ): ಕ್ರಿಕೆಟ್ ಮೈದಾನದಲ್ಲಿ ಈಗಾಗಲೇ ಅನೇಕ ಅಹಿತಕರ ಘಟನೆ ನಡೆದಿದ್ದು, ಸದ್ಯ ಗಾಜಿಯಾಬಾದ್ನಲ್ಲಿ ನಡೆದ ಘಟನೆಯೊಂದು ಕ್ರಿಕೆಟ್ ಪ್ಲೇಯರ್ಸ್ಗೆ ಕೆಲಹೊತ್ತು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇಲ್ಲಿನ ರಾಜ ನಗರದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದ್ದು, ಬ್ಯಾಟಿಂಗ್ ಮಾಡ್ತಿದ್ದ ಪ್ಲೇಯರ್ ಸಿಕ್ಸರ್ ಬಾರಿಸಲು ಮುಂದಾದಾದ ಚೆಂಡು ನೇರವಾಗಿ ಬೌಲರ್ ಮುಖಕ್ಕೆ ಬಿದ್ದಿದೆ. ಇದರಿಂದ ಕ್ಷಣಾರ್ಧದಲ್ಲಿ ಆತ ಕೆಳಕ್ಕೆ ಬಿದ್ದಿದ್ದಾನೆ. ಇದರಿಂದ ಮೈದಾನದಲ್ಲಿದ್ದ ಪ್ಲೇಯರ್ಸ್ ಆತಂಕಕ್ಕೊಳಗಾಗಿದ್ದಾರೆ. ಆದರೆ ಅದೃಷ್ಟವಶಾತ್ ಬೌಲರ್ಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.
Last Updated : Apr 6, 2021, 4:38 PM IST