ವಿಶ್ವ ಅಪ್ಪಂದಿರ ದಿನದಂದೇ ಹೆತ್ತವರಿಗೆ ಮಗ ಥಳಿಸುತ್ತಿರುವ ವಿಡಿಯೋ ವೈರಲ್.. ತಾಯಿ ಸಾವು - ಮಹಾರಾಷ್ಟ್ರದ ಬೀಡ್ ಜಿಲ್ಲೆ
ಬೀಡ್ (ಮಹಾರಾಷ್ಟ್ರ): ಹೆತ್ತವರನ್ನು ಮಗ ದೊಣ್ಣೆಯಿಂದ ಹೊಡೆಯುತ್ತಿರುವ ವಿಡಿಯೋವೊಂದು ವಿಶ್ವ ಅಪ್ಪಂದಿರ ದಿನವಾದ ಇಂದು ವೈರಲ್ ಆಗಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ದೃಶ್ಯವನ್ನು ಗ್ರಾಮದ ಜನರು ಮೊಬೈಲ್ನಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಬಾಬಾಸಾಹೇಬ್ ಆರೋಪಿ ಮಗನಾಗಿದ್ದು, ತಾಯಿ ಶಿವಬಾಯಿ ಖೇಡ್ಕರ್ ಮೃತಪಟ್ಟಿದ್ದಾರೆ. ತಂದೆಯ ಸ್ಥಿತಿ ಗಂಭೀರವಾಗಿದ್ದು, ಅಹ್ಮದ್‌ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಸಂಬಂಧ ಯಾವುದೇ ಪೊಲೀಸ್ ಪ್ರಕರಣ ಇನ್ನೂ ದಾಖಲಾಗಿಲ್ಲ.