ಟ್ರ್ಯಾಂಪೊಲೈನ್ ಮೇಲೆ ಜಿಗಿದ ಶಾಸಕಿ: ವಿಡಿಯೋ ವೈರಲ್ - ಶಾಸಕಿ ರಂಬೈ ಸಿಂಗ್
ಮಧ್ಯಪ್ರದೇಶದಲ್ಲಿ ಚಕೇರಿ ಮೇಳದ ಸಂಭ್ರಮ ಮನೆ ಮಾಡಿದೆ. ಈ ಮೇಳದಲ್ಲಿ ಪಥಾರಿಯಾ ಶಾಸಕಿ ರಾಮ್ಬೈ ಸಿಂಗ್ ಚಕೇರಿ ಮೇಳದ ಆಯೋಜನೆಯಲ್ಲಿ ಬ್ಯೂಸಿಯಾಗಿದ್ದಾರೆ. ಅಷ್ಟೇ ಅಲ್ಲ ಜಾತ್ರೆಯಲ್ಲಿ ಉತ್ಸಾಹಿತರಾಗಿ ಪಾಲ್ಗೊಂಡಿದ್ದು, ಟ್ರ್ಯಾಂಪೊಲೈನ್ ಮೇಲೆ ಜಿಗಿದು ಚಿಕ್ಕ ಮಕ್ಕಳಂತೆ ಸಂಭ್ರಮಪಟ್ಟರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಬುಂಡೇಲಿ ಸಂಪ್ರದಾಯವನ್ನು ಪ್ರದರ್ಶಿಸುವ ಚಾಕೇರಿ ಮೇಳಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಇನ್ನು ಪ್ರತಿ ವರ್ಷ ಸಾವಿರಾರು ಜನರು ಬರುವ ಮಕರ ಸಕ್ರಾಂತಿಯ ಶುಭ ಸಂದರ್ಭದಲ್ಲಿ ಪಾಥೇರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಚಾಕೆರಿ ಮೇಳವನ್ನು ಆಯೋಜಿಸಲಾಗುತ್ತದೆ.