ಆನೆಯನ್ನು ಮರಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದ ಮಾವುತರು: ವಿಡಿಯೋ ವೈರಲ್ - ವಿಡಿಯೋ ವೈರಲ್
ತಮಿಳುನಾಡು: ಕೊಯಮತ್ತೂರಿನಿಂದ ಸುಮಾರು 50 ಕಿಮೀ ದೂರದಲ್ಲಿರುವ ತೆಕ್ಕಂಪಟ್ಟಿಯ ಶಿಬಿರದಲ್ಲಿ ಆನೆಯೊಂದನ್ನು ಮರಕ್ಕೆ ಕಟ್ಟಿ ಮಾವುತರಿಬ್ಬರು ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾರ್ವಜನಿಕರು ಮತ್ತು ವನ್ಯಜೀವಿ ಕಾರ್ಯಕರ್ತರು ಖಂಡನೆ ವ್ಯಕ್ತಪಡಿದ್ದು, ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ತೆಕ್ಕಂಪಟ್ಟಿಯ ಶಿಬಿರದಲ್ಲಿ ಒಟ್ಟು 26 ಆನೆಗಳಿವೆ.