ಸಮನ್ಸ್ ನೀಡಲು ಬಂದ ಪೊಲೀಸಪ್ಪನ ಮೇಲೆ ವ್ಯಕ್ತಿಯಿಂದ ಹಲ್ಲೆ.. ವಿಡಿಯೋ!
ಪುದುಕ್ಕೊಟ್ಟೈ(ತಮಿಳುನಾಡು): ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲು ಊರಿಗೆ ಬಂದಿದ್ದ ಪೊಲೀಸ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ತಮಿಳುನಾಡಿನ ಪುದುಕ್ಕೊಟ್ಟೈನಲ್ಲಿ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಸಮನ್ಸ್ ನೀಡಲು ಬಂದಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿರುವ ವ್ಯಕ್ತಿಯನ್ನ ಸರವಣನ್ ಎಂದು ಗುರುತಿಸಲಾಗಿದೆ.