ನಿಯಂತ್ರಣ ಕಳೆದುಕೊಂಡ ಲಾರಿ: ಇಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ವಲಯಾರ್ (ಕೇರಳ): ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಲಾಟರಿ ಅಂಗಡಿಯನ್ನು ಜಖಂಗೊಳಿಸಿರುವ ಘಟನೆ ಕೇರಳದ ವಲಯಾರ್ ಎಂಬಲ್ಲಿ ನಡೆದಿದೆ. ಪಾಲಕ್ಕಾಡ್ನಿಂದ ವಲಯಾರ್‌ಗೆ ಚಲಿಸುತ್ತಿದ್ದ ಲಾರಿ ಇದಾಗಿದ್ದು, ಇಬ್ಬರು ವ್ಯಕ್ತಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಬೈಕ್ ಜಖಂ ಆಗಿದೆ. ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ವಿಡಿಯೋ ಇಲ್ಲಿದೆ.