ಎರಡು ಬೃಹತ್ ಹೆಬ್ಬಾವುಗಳ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ: ವಿಡಿಯೋ - ಎರಡು ಬೃಹತ್ ಹೆಬ್ಬಾವು
ಹೃಷಿಕೇಶ್(ಉತ್ತರಾಖಂಡ): ಸುಮಾರು 10ರಿಂದ 12 ಅಡಿ ಉದ್ದದ ಎರಡು ಹೆಬ್ಬಾವು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉತ್ತರಾಖಂಡನ ಗೌಲಪರ್ ಪ್ರದೇಶದ ರೈತರ ಜಮೀನಿನಲ್ಲಿ ಎರಡು ಬೃಹತ್ ಹೆಬ್ಬಾವು ಕಾಣಿಸಿಕೊಂಡಿವೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಅವರು ಹಾವುಗಳನ್ನ ರಕ್ಷಣೆ ಮಾಡಿ ಕಾಡಿನಲ್ಲಿ ಬಿಟ್ಟು ಬರುವಲ್ಲಿ ಯಶಸ್ವಿಯಾಗಿದ್ದಾರೆ.