ಉದ್ಯಮಿಗಳೊಂದಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತು... ಮುಖೇಶ್ ಅಂಬಾನಿ ಸೇರಿ ಪ್ರಮುಖರು ಭಾಗಿ! - ಉದ್ಯಮಿಗಳೊಂದಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತು
ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ಯಮಿಗಳೊಂದಿಗೆ ಕೆಲಹೊತ್ತು ಸಂವಾದ ನಡೆಸಿದರು. ಈ ವೇಳೆ ರಿಲಯನ್ಸ್ ಇಂಡಸ್ಟ್ರೀ ಮುಖ್ಯಸ್ಥ ಮುಖೇಶ್ ಅಂಬಾನಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಸಂವಾದದ ವೇಳೆ ಪ್ರಧಾನಿ ನರೇದ್ರ ಮೋದಿ ಹಾಡಿಹೊಗಳಿದ ಟ್ರಂಪ್, ಇಲ್ಲಿಗೆ ಬಂದಿರುವುದು ಗೌರವದ ಸಂಗತಿ. ನಿಮ್ಮೊಂದಿಗೆ ವಿಶೇಷವಾದ ಪ್ರಧಾನಿ ಇದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಮೋದಿ ಓರ್ವ ಕಠಿಣ ವ್ಯಕ್ತಿ. ಅದ್ಭುತ ಕೆಲಸ ಮಾಡುತ್ತಿದ್ದು, ನಾವು ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದರು.