ಯಶಸ್ವಿಯಾಗಿ ಭಾರತ ಪ್ರವಾಸ ಮುಗಿಸಿದ ಟ್ರಂಪ್... ಪತ್ನಿ ಜತೆ ತವರಿನತ್ತ ದೊಡ್ಡಣ್ಣನ ಪ್ರಯಾಣ! - ಡೊನಾಲ್ಡ್ ಟ್ರಂಪ್ ಭಾರತದ ಪ್ರವಾಸ ಮುಕ್ತಾಯ
ಎರಡು ದಿನಗಳ ಭಾರತದ ಪ್ರವಾಸ ಯಶಸ್ವಿಯಾಗಿ ಮುಗಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದತ್ತ ಪ್ರಯಾಣ ಬೆಳೆಸಿದರು. ಪತ್ನಿ ಮೆಲೆನಿಯಾ ಜತೆ ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ವಿಶೇಷ ಔತಣಕೂಟದಲ್ಲಿ ಭಾಗಿಯಾದ ಟ್ರಂಪ್ ತದನಂತರ ತವರಿನತ್ತ ಮುಖ ಮಾಡಿದರು.