ಕರ್ನಾಟಕ

karnataka

ETV Bharat / videos

ಅಜ್ಮೀರ್ ದರ್ಗಾದಲ್ಲಿ 'ಉರುಸ್​ ಸಂಭ್ರಮ, ಸತತ ಆರು ದಿನ ನಡೆಯುತ್ತೆ ಆಕರ್ಷಕ 'ಕವ್ವಾಲಿ' ಗಾಯನ - ಅಜ್ಮೀರ್ ದರ್ಗಾ ಉರೂಸ್ ಸುದ್ದಿ

By

Published : Mar 2, 2020, 8:22 AM IST

'ಕವ್ವಾಲಿ,' ಸೂಫಿ ಭಕ್ತಿ ಗೀತೆಯಾಗಿದ್ದು, ದಕ್ಷಿಣ ಏಷ್ಯಾದ್ಯಂತ ಸೂಫಿ ದರ್ಗಾಗಳಲ್ಲಿ ಹೆಚ್ಚಾಗಿ ಈ ಕವ್ವಾಲಿ ಪ್ರದರ್ಶನ ನೀಡಲಾಗುತ್ತದೆ. ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ಷರೀಫ್ ದರ್ಗಾದಲ್ಲಿ ಈಗ ಉರುಸ್​ ಹಬ್ಬದ ಸಂಭ್ರಮ. ಪೂಜ್ಯ ಸೂಫಿ ಸಂತರಾದ ಮೊಯಿನುದ್ದೀನ್ ಚಿಸ್ತಿಯವರ ಮರಣ ವಾರ್ಷಿಕೋತ್ಸವ ನಿಮಿತ್ತ ನಡೆಯುವ ವಾರ್ಷಿಕ ಉರುಸ್​ ಸಮಾರಂಭದಲ್ಲಿ ಕವ್ವಾಲಿಯ ಮೂಲಕ ಭಕ್ತಿ ಸುಧೆ ಹರಿಯಿತು. ಆರು ದಿನಗಳವರೆಗೆ ನಡೆಯುವ ಈ ಸಂಭ್ರಮದಲ್ಲಿ ರಾತ್ರಿಯಿಡೀ ಕವ್ವಾಲಿ ಹಾಡಲಾಗುತ್ತದೆ. ನೂರಾರು ಪ್ರಸಿದ್ಧ ಕವ್ವಾಲಿ ಗಾಯಕರು ಬಂದು ಈ ಕವ್ವಾಲಿ ಗೀತೆಗಳನ್ನು ಹಾಡುತ್ತಾರೆ. ಇದು ದೇಶ-ವಿದೇಶಗಳಿಂದ ಬರುವ ಸಾವಿರಾರು ಯಾತ್ರಿಕರನ್ನು ಆಕರ್ಷಿಸುತ್ತದೆ.

ABOUT THE AUTHOR

...view details