ಕರ್ನಾಟಕ

karnataka

ETV Bharat / videos

ಪಾಕ್​ ಅಣುಬಾಂಬ್​​ ದಾಳಿ ಮಾಡುತ್ತೆ ಎಂದು 'ಕೈ'​ ಭಯಪಡ್ತಿತ್ತು, ಇದೀಗ ಭಾರತದ ಸರ್ಜಿಕಲ್​​ ದಾಳಿಗೆ ಪಾಕ್​​ ಹೆದರುತ್ತಿದೆ: ಯೋಗಿ - ಉತ್ತರ ಪ್ರದೇಶದ ಬಿಹಾರದಲ್ಲಿ ಯೋಗಿ ಆದಿತ್ಯನಾಥ್​

By

Published : Oct 21, 2020, 5:49 PM IST

ಪಾಟ್ನಾ: ಬಿಹಾರ ಚುನಾವಣೆ ಕಾರಣ ಸರಣಿ ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಾತನಾಡ್ತಿದ್ದು, ಇಂದು ಕೂಡ ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಅಭ್ಯರ್ಥಗಳ ಪರ ಪ್ರಚಾರದಲ್ಲಿ ಭಾಗಿಯಾದರು. ಈ ವೇಳೆ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್​​, ಈ ಹಿಂದೆ ಭಾರತದ ಮೇಲೆ ಪಾಕ್​ ಅಣುಬಾಂಬ್​ ದಾಳಿ ಮಾಡುತ್ತದೆ ಎಂದು ಭಯಪಡುತ್ತಿತ್ತು. ಆದರೆ ಇದೀಗ ಭಾರತ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ ದಾಳಿ ನಡೆಸಬಹುದು ಎಂಬ ಭಯದಲ್ಲಿ ಅಲ್ಲಿನ ಪ್ರಧಾನಿ ವಿಶ್ವದಾದ್ಯಂತ ಓಡಾಡುತ್ತಿದ್ದಾರೆ. ಇದು ಪ್ರಧಾನಿ ಮೋದಿಯವರ ತಾಕತ್ತು​ ಎಂದರು.

ABOUT THE AUTHOR

...view details