ಕೈಯಲ್ಲಿ ತ್ರಿವರ್ಣ.. ಎದೆ ಮೇಲೆ ದೀಪ.. ಜಲ ಯೋಗದ ಮೂಲಕ ಹುತಾತ್ಮ ಜವಾನರಿಗೆ ಗೌರವ - Chhattisgarh Maoist attack
ಖುರ್ದಾ(ಒಡಿಶಾ) : ಛತ್ತೀಸ್‌ಗಢ್ ನಕ್ಸಲ್ ದಾಳಿಯಲ್ಲಿ 22 ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಬಲಿದಾನಕ್ಕೆ ದೇಶಾದ್ಯಂತ ಜನರ ಮನ ಮಿಡಿದಿದೆ. ಈ ಮಧ್ಯೆ ಖುರ್ದಾ ಜಿಲ್ಲೆಯ ಟ್ಯಾಂಗಿ ಸಮೀಪದ ಸರಪರಿ ಗ್ರಾಮದ ಸುದಮ್ ಚರಣ್ ಸಾಹು ಜವಾನರಿಗೆ ವಿಶಿಷ್ಟ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ಎದೆಯ ಮೇಲೆ ದೀಪ ಇಟ್ಟುಕೊಂಡು 'ಜಲ ಯೋಗ'(ನೀರಿನಲ್ಲಿ ಯೋಗ) ಮಾಡುವ ಮೂಲಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ. ಹುತಾತ್ಮರಿಗೆ ಗೌರವ ಸಲ್ಲಿಸಲು ಸಾಹು ಆಯ್ದುಕೊಂಡ ಈ ವಿಶೇಷ ಮಾರ್ಗಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.
Last Updated : Apr 6, 2021, 5:16 PM IST