ಕಮಲ್ನಾಥ್ ಅವಾಚ್ಯ ಶಬ್ದ ಬಳಕೆ: ಸಚಿವೆ ಸ್ಮೃತಿ ಇರಾನಿ ಹೇಳಿದ್ದಿಷ್ಟು! - ಬಿಜೆಪಿ ಸಚಿವೆ ಬಗ್ಗೆ ಕಮಲ್ನಾಥ್ ಅವಾಚ್ಯ ಶಬ್ದ ಬಳಕೆ
ಬಿಜೆಪಿ ಸಚಿವೆ ಕುರಿತು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಅವಾಚ್ಯ ಶಬ್ದ ಬಳಕೆ ಮಾಡಿದ್ದು, ಇದಕ್ಕೆ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿದ್ದಾರೆ. ಕಮಲ್ನಾಥ್ ಮಾತ್ರವಲ್ಲ, ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಯಕರ್ತರ ಮೇಲೆ ಅವರ ಪಕ್ಷದವರೇ ಕೆಲ ದಿನಗಳ ಹಿಂದೆ ಹಲ್ಲೆ ನಡೆಸಿದ್ದರು. ಇದ್ದರಿಂದ ಆ ಪಕ್ಷದಲ್ಲಿ ಮಹಿಳೆಯರನ್ನ ಯಾವ ರೀತಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಇಂತಹ ಘಟನೆಗಳು ಕಾಂಗ್ರೆಸ್ ಪಕ್ಷದ ನಿಜಾಂಶ ಹೊರಗೆಳೆಯುತ್ತಿವೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಕಮಲ್ನಾಥ್ ಹೇಳಿಕೆಗೆ ಬಿಜೆಪಿ ನಾಯಕರು ಸೇರಿ ಅನೇಕರು ಈಗಾಗಲೇ ಕಿಡಿ ಕಾರುತ್ತಿದ್ದಾರೆ.