ಕರ್ನಾಟಕ

karnataka

ಲಂಚದ ಹಣ ಹಂಚಿಕೊಳ್ಳಲು ಇಬ್ಬರು ಪೊಲೀಸರ ನಡುವೆ ಫೈಟ್​... ಸಿಸಿಟಿವಿಯಲ್ಲಿ ವಿಡಿಯೋ ಸೆರೆ

By

Published : Aug 13, 2019, 9:32 PM IST

ಪ್ರಯಾಗ್​ರಾಜ್​​(ಯುಪಿ): ಲಂಚದ ಹಣ ಹಂಚಿಕೊಳ್ಳುವ ವಿಚಾರವಾಗಿ ಇಬ್ಬರು ಪೊಲೀಸರು ಪರಸ್ಪರ ಹೊಡೆದಾಡಿಕೊಂಡಿದ್ದು, ಇದರ ವಿಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉತ್ತರಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಕೈಯಲ್ಲಿದ್ದ ಲಾಠಿಯಿಂದ ಇಬ್ಬರು ಹೊಡೆದಾಡಿಕೊಂಡಿದ್ದು, ಈ ವೇಳೆ ಮತ್ತಿಬ್ಬರು ಸ್ಥಳದಲ್ಲೇ ಉಪಸ್ಥಿತರಿದ್ದರು. ಈಗಾಗಲೇ ಈ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ಪೊಲೀಸ್​ ಇಲಾಖೆ ಆದೇಶ ಹೊರಡಿಸಿದೆ.

ABOUT THE AUTHOR

...view details