ಉಗುಳುತ್ತಾ ತಂದೂರಿ ರೊಟ್ಟಿ ಬೇಯಿಸುತ್ತಿದ್ದವರು ಅರೆಸ್ಟ್ - ವಿಡಿಯೋ ನೋಡಿ - ಉಗುಳುತ್ತಾ ರೊಟ್ಟಿ ಮಾಡುತ್ತಿರುವ ವಿಡಿಯೋ ವೈರಲ್
ಶಾಮ್ಲಿ (ಉತ್ತರ ಪ್ರದೇಶ): ಶಾಮ್ಲಿ ಜಿಲ್ಲೆಯ ಕಾರಂಜಿ ಚೌಕ್‌ನಲ್ಲಿರುವ ರಸ್ತೆ ಬದಿಯ ಹೋಟೆಲ್ವೊಂದರಲ್ಲಿ ಇಬ್ಬರು ಎಂಜಲು ಉಗುಳುತ್ತಾ ರೊಟ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಉಗುಳುತ್ತಾ ರೊಟ್ಟಿ ಮಾಡಿದ್ದು ನಿಜವೆಂಬುದು ಬಯಲಾಗಿದೆ. ಈ ಹಿಂದೆ ಕೂಡ ಗಾಜಿಯಾಬಾದ್ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಲಟ್ಟಿಸಿದ ರೊಟ್ಟಿಯನ್ನು ಉಗುಳಿ ಬೇಯಿಸುತ್ತಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದನು.