ಕೊಚ್ಚಿಯಲ್ಲಿ ಅನಧಿಕೃತ 2 ಬೃಹತ್ ಕಟ್ಟಡ ತೆರವು.. ಸ್ಫೋಟಕ ಬಳಸಿ ಬಿಲ್ಡಿಂಗ್ ನೆಲಸಮ.. - Two luxury apartment complexes demolished in Kochi
ಕೊಚ್ಚಿ(ಕೇರಳ):ನಗರದಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಇಂದು 2ನೇ ಹಂತದಲ್ಲಿ ಎರಡು ಅಪಾರ್ಟ್ಮೆಂಟ್ಗಳನ್ನು ಕೆಡವಲಾಗಿದೆ. ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಾಯಲೋರಂ ಹೆಸರಿನ ಲಕ್ಷುರಿ ಅಪಾರ್ಟ್ಮೆಂಟ್ಗಳನ್ನು ಇಂದು ನಿಯಂತ್ರಿತ ಸ್ಫೋಟಕಗಳನ್ನು ಬಳಸಿ ನೆಲಸಮಗೊಳಿಸಲಾಗಿದೆ. ನಿನ್ನೆ H2o ಹೋಲಿ ಫೇತ್ ಹೆಸರಿನ ಅಪಾರ್ಟ್ಮೆಂಟ್ನ ಸ್ಫೋಟಕಗಳನ್ನು ಬಳಸಿ ಕೆಡವಲಾಗಿತ್ತು. 16 ಅಂತಸ್ತುಗಳ ಕಟ್ಟಡವನ್ನು ಸುಮಾರು 220 ಕೆಜಿ ಸ್ಫೋಟಕ ಬಳಸಿ ನೆಲಸಮಗೊಳಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ತೆರವು ಕಾರ್ಯಾಚರಣೆ ನಡೆಯಿತು. ಕರಾವಳಿ ನಿಯಂತ್ರಣ ವಲಯದ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸುಪ್ರೀಂಕೋರ್ಟ್ ಅನಧಿಕೃತ ಕಟ್ಟಡಗಳನ್ನ ಕೆಡವಲು ಆದೇಶಿಸಿತ್ತು.