ಪಾಕ್ನಲ್ಲಿ ಹಿಂದೂಗಳ ಮೇಲೆ ಕಿರುಕುಳ... ಭಾರತಕ್ಕೆ ಬಂದು ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು! - ಪಾಕ್ನಲ್ಲಿ ಹಿಂದುಗಳ ಮೇಲೆ ಕಿರುಕುಳ
ಆರ್ಟಿಕಲ್ 370 ರದ್ದುಗೊಂಡ ಬಳಿಕ ಪಾಕ್ನಲ್ಲಿ ಹಿಂಸಾತ್ಮಕ ಕೃತ್ಯಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ವಾಸವಾಗಿರುವ ಹಿಂದೂಗಳಿಗೆ ಇನ್ನಿಲ್ಲದ ಕಿರುಕುಳ ನೀಡಲಾಗ್ತಿದೆ. ಇದರ ಮಧ್ಯೆ ಅಲ್ಲಿನ ಹಿಂದೂ ಜೋಡಿಗಳು ಭಾರತಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದೆ. ಕಳೆದ ಶನಿವಾರದಂದು ಹಿಂದೂ ಸಂಪ್ರದಾಯದಂತೆ ಇವರು ಗುಜರಾತ್ನ ರಾಜಕೋಟ್ನಲ್ಲಿ ವೈವಾಹಿಕ ಜೀವನಕ್ಕೆ ದಾಪುಗಾಲಿಟ್ಟಿದ್ದಾರೆ.