ತಮಿಳುನಾಡಿನಲ್ಲಿ ಅಪ್ಪ, ಮಗನ ಲಾಕ್ಅಪ್ ಡೆತ್: ಮಾನವ ಹಕ್ಕುಗಳ ಕಾರ್ಯಕರ್ತ ಹೇಳಿದ್ದು ಏನು!? - ಟುಟಿಕೋರಿನ್ ಲಾಕ್ಅಪ್ ಡೆತ್
ಚೆನ್ನೈ: ತಮಿಳುನಾಡಿನ ಟುಟಿಕೋರಿನ್ನಲ್ಲಿ ಲಾಕ್ಡೌನ್ ಉಲ್ಲಂಘಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ಹಾಗೂ ಆತನ ಮಗ ಪೊಲೀಸ್ ಠಾಣೆಯಲ್ಲಿ ಲಾಕ್ಅಪ್ ಡೆತ್ ಆಗಿದ್ದು, ಅದಕ್ಕೆ ಎಲ್ಲಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತ ಹೆನ್ರಿ ಟಿಫಾಗ್ನೆ ಮಾತನಾಡಿದ್ದು, ಮೃತ ಜಯರಾಜ್ ಹಾಗೂ ಫಿನಿಕ್ಸ್ ಮೇಲೆ ಪೊಲೀಸ್ ಸ್ನೇಹಿತರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.