ಕರ್ನಾಟಕ

karnataka

ETV Bharat / videos

ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿ ಶಿಕ್ಷಕರನ್ನು ಬೀಳ್ಕೊಟ್ಟ ಬುಡಕಟ್ಟು ಜನಾಂಗ - ವಿಜಯನಗರಂ ಜಿಲ್ಲೆಯ ಗುಮ್ಮಲಕ್ಷ್ಮಿಪುರಂ ಮಂಡಲ

By

Published : Feb 3, 2021, 7:42 PM IST

ವಿಜಯನಗರಂ(ಆಂಧ್ರಪ್ರದೇಶ): 2011 ರಿಂದ ಬುಡಕಟ್ಟು ಜನಾಂಗದವರಿಗೆ ತರಗತಿಗಳನ್ನು ಮಾಡುತ್ತಿದ್ದ ಗೌಡು ನರೇಂದ್ರ ಎಂಬ ಶಿಕ್ಷಕರು ವರ್ಗಾವಣೆಗೊಂಡಿದ್ದು, ಬುಡಕಟ್ಟು ಜನಾಂಗದವರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ನೃತ್ಯ ಪ್ರದರ್ಶನಗಳ ಮಧ್ಯೆ ಹಳ್ಳಿಯಲ್ಲಿ ಮೆರವಣಿಗೆ ನಡೆಸಿ, ಬೀಳ್ಕೊಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಜಯನಗರಂ ಜಿಲ್ಲೆಯ ಗುಮ್ಮಲಕ್ಷ್ಮಿಪುರಂ ಮಂಡಲದಲ್ಲಿರುವ ಮಲ್ಲುಗುಡ ಮಂಡಲ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಗೌಡು ನರೇಂದ್ರ ಕಾರ್ಯ ನಿರ್ವಹಿಸಿದ್ದರು. ಬುಡಕಟ್ಟು ಜನಾಂಗದವರ ಈ ಪ್ರೇಮಕ್ಕೆ ಶಿಕ್ಷಕರು ಧನ್ಯವಾದ ಹೇಳಿದ್ದಾರೆ.

ABOUT THE AUTHOR

...view details