ಅಂಫಾನ್ ಅಬ್ಬರ.. ಧರೆಗುರುಳಿದ ಮರಗಳು, ವಿದ್ಯುತ್ ಸಂಪರ್ಕ ಕಡಿತ - ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ
ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಅಬ್ಬರ ಜೋರಾಗಿದ್ದು, ಭಾರಿ ಗಾಳಿಯಿಂದ ಹಲವೆಡೆ ಮರಗಳು ಧರೆಗುರುಳಿವೆ. ಪೂರ್ವ ಮಿಡ್ನಾಪುರದಲ್ಲಿ ಭಾರಿ ಗಾಳಿಯಿಂದ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ರಸ್ತೆಗೆ ಬಿದ್ದ ಮರಗಳನ್ನು ಎನ್ಡಿಆರ್ಎಫ್ ತಂಡ ತೆರವುಗೊಳಿಸುತ್ತಿದೆ.