ಕ್ರೀಡಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮನಾಗಿ ಭಾವಿಸಿ: ಸೋನಾಲ್ ಮಾನ್ಸಿಂಗ್ - ದೆಹಲಿ ವಿಶ್ವವಿದ್ಯಾಲಯ
ನವದೆಹಲಿ: ಕೋವಿಡ್ ಬಿಕ್ಕಟ್ಟಿನಿಂದಾಗಿ ಪಠ್ಯೇತರ ಚಟುವಟಿಕೆ (ಇಸಿಎ) ಕೋಟಾ ಅಡಿಯಲ್ಲಿ ಪ್ರವೇಶಾತಿ ನಿಲ್ಲಿಸಿರುವ ದೆಹಲಿ ವಿಶ್ವವಿದ್ಯಾಲಯದ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮನಾಗಿ ಕಾಣಬೇಕು ಎಂದು ನೃತ್ಯ ಕಲಾವಿದೆ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸೋನಾಲ್ ಮಾನ್ಸಿಂಗ್ ಆಗ್ರಹಿಸಿದ್ದಾರೆ. ಈಟಿವಿ ಭಾರತದ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಮಹಿಳೆಯರ ಸ್ವಾತಂತ್ರ್ಯ' ಎಂಬ ವ್ಯಾಖ್ಯಾನ ಇದೀಗ ಬದಲಾಗಿದೆ. ನನ್ನ ಕುಟುಂಬದ ರಾಜಕೀಯ ಹಿನ್ನೆಲೆಯ ಹೊರತಾಗಿ ಕೂಡ ನಾನು ಮೃದುವಾಗಿ ಆಗಲಿ, ಇತರರನ್ನು ಮೆಚ್ಚಿಸಲಾಗಲಿ ಮಾತನಾಡುವುದಿಲ್ಲ ಎಂದು ಕೂಡ ಹೇಳಿದರು.