ಕರ್ನಾಟಕ

karnataka

ETV Bharat / videos

ಹೆಲ್ಮೆಟ್ ಧರಿಸಿಲ್ಲ ಅಂತ ಪೊಲೀಸ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಟ್ರಾಫಿಕ್ ಪೊಲೀಸ್- ವಿಡಿಯೋ - ಹೆಲ್ಮೆಟ್

By

Published : Apr 15, 2021, 9:03 AM IST

ರಾಂಚಿ (ಜಾರ್ಖಂಡ್): ಹೆಲ್ಮೆಟ್ ಧರಿಸದ ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ಪೊಲೀಸ್ ಮನಬಂದಂತೆ ಥಳಿಸಿರುವ ಘಟನೆ ರಾಂಚಿಯ ಸಹಜಾನಂದ್ ಚೌಕ್ ಬಳಿ ನಡೆದಿದೆ. ಮೊದಲು ಪೊಲೀಸ್‌ ಸಿಬ್ಬಂದಿಯ ಬೈಕ್​ ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ದಂಡ ಪಾವತಿಸುವಂತೆ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕೋಪಗೊಂಡ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿದ್ದಾರೆ. ಇಬ್ಬರು ಆರಕ್ಷಕರ ನಡುವಿನ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಂಚಿ ನಗರದ ಎಸ್‌ಪಿ ಸೌರಭ್, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details