ಕರ್ನಾಟಕ

karnataka

ETV Bharat / videos

ಅಡ್ಡಾದಿಡ್ಡಿ ಟ್ರ್ಯಾಕ್ಟರ್​ ಓಡಿಸಿದ ಪ್ರತಿಭಟನಾಕಾರ... ಪ್ರಾಣ ಉಳಿಸಿಕೊಳ್ಳಲು ಕಂಗೆಟ್ಟು ಓಡಾಡಿದ ಪೊಲೀಸ್​! - ರೈತರ ಟ್ರ್ಯಾಕ್ಟರ್ ಪರೇಡ್​ ನ್ಯೂಸ್​

By

Published : Jan 26, 2021, 5:19 PM IST

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸಾವಿರಾರು ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಸಂಘರ್ಷ ಸಹ ನಡೆದಿದೆ. ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾನಿರತರನ್ನ ಚದುರಿಸಲು ಮುಂದಾಗುತ್ತಿದ್ದ ವೇಳೆ ಪ್ರತಿಭಟನಾಕಾರನೋರ್ವ ಅಡ್ಡಾದಿಡ್ಡಿಯಾಗಿ ಟ್ರ್ಯಾಕ್ಟರ್ ಓಡಿಸಿದ್ದಾನೆ. ಈ ವೇಳೆ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಪೊಲೀಸರು ದಿಕ್ಕಾಪಾಲಾಗಿ ಓಡಾಡಿದ್ದಾರೆ. ರೈತರು ನಡೆಸಲು ಮುಂದಾಗಿದ್ದ ಟ್ರ್ಯಾಕ್ಟರ್​​ ಪರೇಡ್​ಗೆ ದೆಹಲಿ ಪೊಲೀಸರು ಕೆಲವೊಂದು ನಿಯಮದಡಿ ರೂಟ್ ಮ್ಯಾಪ್ ಹಾಕಿ ಕೊಟ್ಟಿದ್ದರು. ಆದರೆ ಇದನ್ನ ಗಾಳಿಗೆ ತೂರಿ ಕೆಂಪುಕೋಟೆಗೆ ನುಗ್ಗಲು ಯತ್ನಿಸಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ABOUT THE AUTHOR

...view details