ಪಾನೀಯದಲ್ಲಿ ವಿಷ ಬೆರಸಿ ಕುಡಿದ ಕುಟುಂಬ... ಮೂವರ ಸಾವು, ಬದುಕುಳಿದ ಮಗ! - ಚಿತ್ತೂರು ಕುಟುಂಬ ಆತ್ಮಹತ್ಯೆ
ಕುಟಂಬವೊಂದು ತಂಪುಪಾನೀಯದಲ್ಲಿ ವಿಷ ಬೆರಸಿ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹೀಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದರೆ ಮಗ ಬದುಕುಳಿದಿದ್ದಾನೆ. ಚಿತ್ತೂರಿನ ಓಬನಪಲ್ಲೆ ಹೌಸಿಂಗ್ ಕಾಲೋನಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಲಾರಿ ಡ್ರೈವರ್ ರವಿ ಕುಟುಂಬ ಕಲಹದಿಂದ ಬೇಸತ್ತು ತಂಪು ಪಾನಿಯದಲ್ಲಿ ವಿಷ ಬೆರಸಿದ್ದಾನೆ. ಆ ವಿಷ ಬೆರಸಿದ ಕೂಲ್ಡ್ರಿಂಕ್ಸ್ ಅನ್ನು ರವಿ ಸೇರಿದಂತೆ ಪತ್ನಿ ಭುವನೇಶ್ವರಿ, 9 ವರ್ಷದ ಮಗಳು ಗಾಯತ್ರಿ ಮತ್ತು ಏಳು ವರ್ಷದ ಮಗ ಸಾಯಿಗೆ ಕುಡಿಸಿದ್ದಾನೆ. ತಂದೆ ರವಿ, ತಾಯಿ ಭುವನೇಶ್ವರಿ ಮತ್ತು ಸಹೋದರಿ ಗಾಯತ್ರಿ ಸಾವನ್ನಪ್ಪಿದ್ದು, ಸಹೋದರ ಸಾಯಿ ಬದುಕುಳಿದಿದ್ದಾನೆ. ಕುಟುಂಬದ ಕಲಹವೇ ಇದಕ್ಕೆ ಕಾರಣ ಎಂದು ಸಂಬಂಧಿಕರು ಮತ್ತು ನೆರೆಹೊರೆಯವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.