ಕರ್ನಾಟಕ

karnataka

ETV Bharat / videos

ಸಹೋದರರನ್ನು ನುಂಗಿದ ಕೆರೆ: ಆಟವಾಡಲು ತೆರಳಿದ್ದ ಮೂವರು ಮಕ್ಕಳು ನೀರುಪಾಲು! - Three Children found dead in lake,

By

Published : Jan 20, 2020, 2:49 PM IST

ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನಿನ್ನೆ ಮಧ್ಯಾಹ್ನ ಆಟವಾಡಲು ತೆರಳಿದ್ದ ಮಕ್ಕಳು ನೀರುಪಾಲಾಗಿರುವ ಘಟನೆ ರೆಂಜಲ್​ ತಾಲೂಕಿನ ಪೇಪರ್​ ಮಿಲ್​ ಬಳಿ ನಡೆದಿದೆ. ಮಕ್ಕಳು ಆಟವಾಡಲು ತೆರಳಿದ್ದು, ಸಂಜೆಯಾದ್ರೂ ಮನೆಗೆ ಬಾರದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದ್ರೆ ಇಂದು ಬೆಳಗ್ಗೆ ಪೇಪರ್​ ಮಿಲ್​ ಬಳಿ ಇರುವ ಕೆರೆಯಲ್ಲಿ ಮೂವರು ಮಕ್ಕಳ ಶವ ತೇಲುತ್ತಿರುವುದು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮಕ್ಕಳ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಮೃತ ಮಕ್ಕಳನ್ನು ಸಿದ್ದಾರ್ಥ್​ (8), ದೀಪಕ್​ (7) ಮತ್ತು ಹುಜುರ್​ (6) ಎಂದು ಗುರುತಿಸಲಾಗಿದೆ. ಸಿದ್ದಾರ್ಥ್​ ಮತ್ತು ದೀಪಕ್​ ಇಬ್ಬರು ಸಹೋದರರಾಗಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬದವ ಆಕ್ರಂದನ ಮುಗಿಲು ಮುಟ್ಟಿತ್ತು.

ABOUT THE AUTHOR

...view details