ಸಿನಮನ್ ಹಾಟ್ ಚಾಕೊಲೇಟ್ನೊಂದಿಗೆ ನಿಮ್ಮ ವಾರಾಂತ್ಯ ಆನಂದಿಸಿ - ದಾಲ್ಚಿನ್ನಿ ಹಾಟ್ ಚಾಕೊಲೇಟ್
ತೀವ್ರ ಕೆಲಸದ ಒತ್ತಡದಿಂದ ದಣಿದಿದ್ದರೆ ಮಸಾಲೆಯುಕ್ತ ಸಿನಮನ್ ಹಾಟ್ ಚಾಕೊಲೇಟ್ ನಿಮಗೆ ವಿಶ್ರಾಂತಿ ನೀಡುತ್ತದೆ. ಅನ್ಲಾಕ್ 1.0 ರ ಈ ಹಂತದಲ್ಲಿ ದಿನವಿಡೀ ಮನೆಯ ಕೆಲಸಗಳಲ್ಲಿ ನಿರತರಾಗಿರುವವರಿಗೆ, ಅದರಲ್ಲೂ ವರ್ಕ್ ಫ್ರಂ ಹೋಮ್ ಮಾಡುತ್ತಿರುವವರಿಗೆ ಇದು ಉತ್ತಮ ಬಿಸಿ ಪಾನೀಯವಾಗಿದೆ. ದಾಲ್ಚಿನ್ನಿ, ಹಾಲಿನ ಕೆನೆ ಮತ್ತು ಕೋಕೋ ಪೌಡರ್ ಮಿಶ್ರಣದಿಂದ ಮಾಡುವ ಸಿನಮನ್ ಹಾಟ್ ಚಾಕೊಲೇಟ್ ಅನ್ನು ತಯಾರಿಸಿ ಸೇವಿಸಿ. ಹಾಗೆಯೇ ನಿಮಗೆ ತಿಳಿದಿರುವ ಹಾಟ್ ಚಾಕೊಲೇಟ್ ಪಾಕವಿಧಾನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.