ದೇಶದ ಯಾವುದೇ ಪ್ರಜೆ ಹಸಿವಿನಿಂದ ಬಳಲುವುದಕ್ಕೆ ಬಿಡಲ್ಲ: ರಾಮ್ವಿಲಾಸ್ ಪಾಸ್ವಾನ್ ಅಭಯ - ಲಾಕ್ಡೌನ್
ನವದೆಹಲಿ: ಲಾಕ್ಡೌನ್ ಸಮಯದಲ್ಲಿ ದೇಶದ ಜನರಿಗೆ ವಿತರಣೆ ಮಾಡುವಷ್ಟು ಆಹಾರ ದಾಸ್ತಾನು ನಮ್ಮಲ್ಲಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಇಂತಹ ಕಠಿಣ ಸ್ಥಿತಿಯಲ್ಲಿ ದೇಶದ ಜನರಿಗೆ ವಿತರಣೆ ಮಾಡುವಷ್ಟು ಅಕ್ಕಿ, ಗೋಧಿ ಸೇರಿದಂತೆ ಎಲ್ಲ ದಾಸ್ತಾನು ನಮ್ಮ ಬಳಿ ಇದ್ದು,ದೇಶದ ಯಾವುದೇ ಪ್ರಜೆ ಹಸಿವಿನಿಂದ ಬಳಲುವುದಕ್ಕೆ ಬಿಡಲ್ಲ ಎಂದಿದ್ದಾರೆ.