ಮನುಷ್ಯರಿಗಿಂತ ಭಿನ್ನವಲ್ಲ ಮೂಕ ಪ್ರಾಣಿಗಳ ಪ್ರೀತಿ -ವಾತ್ಸಲ್ಯ: ಹೀಗಿದೆ ತಾಯಿ ಹಸುವಿನ ರೋಧನೆ - human love
ಮಲ್ಕಂಗಿರಿ(ಒಡಿಶಾ): ಮೂಕ ಪ್ರಾಣಿಗಳ ಪ್ರೀತಿ ಮತ್ತು ವಾತ್ಸಲ್ಯ ಮನುಷ್ಯರಗಿಂತ ಭಿನ್ನವೇನಲ್ಲ. ಇಲ್ಲಿ ನಡೆದಿರುವ ಘಟನೆಯೊಂದು ಎಂತಹವರಿಗೂ ಕಣ್ಣೀರು ತರಿಸುತ್ತದೆ. ವಾಹನೊಂದು ಡಿಕ್ಕಿ ಹೊಡೆದಿದ್ದರಿಂದ ಕರುವೊಂದು ಗಾಯಗೊಂಡಿತ್ತು. ಅದನ್ನು ನೋಡಿದ ಸ್ಥಳೀಯರು ಅದಕ್ಕೆ ಚಿಕಿತ್ಸೆ ನೀಡಲೆಂದು ರಿಕ್ಷಾದಲ್ಲಿ ಜಿಲ್ಲಾ ಕೇಂದ್ರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದರು. ಆದರೆ, ತಾಯಿ ಕರು ರಿಕ್ಷಾವನ್ನೇ ಹಿಂಬಾಲಿಸುವ ಮೂಲಕ ಮನುಷ್ಯರಿಗಿಂತ ತನ್ನ ಪ್ರೀತಿ-ವಾತ್ಸಲ್ಯ ಕಡಿಮೆ ಇಲ್ಲ ಅನ್ನೋದನ್ನು ತೋರ್ಪಡಿಸಿದೆ.