ವರುಣನ ಅಬ್ಬರಕ್ಕೆ ರಸ್ತೆಯಲ್ಲೇ ಪ್ರವಾಹ ಸ್ಥಿತಿ; ತೇಲಿ ಹೋದ ವ್ಯಕ್ತಿ - ವಿಡಿಯೋ! - ಹೈದರಾಬಾದ್ ಮಳೆ ಸುದ್ದಿ
ಹೈದರಾಬಾದ್: ತೆಲಂಗಾಣದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಳೆ ಹೈದರಾಬಾದ್ನ ಫಲಕ್ನುಮಾ ಬಳಿಕ ಬಾರ್ಕಾಸ್ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ವ್ಯಕ್ತಿಯೊಬ್ಬ ತೇಲಿ ಹೋಗಿದ್ದಾನೆ. ಆತನ ರಕ್ಷಣೆ ಮಾಡಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.