ಕೆರೆ ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದ ಬಿಜೆಪಿ ಶಾಸಕ - undefined
ಕೆರೆಗೆ ನೀರು ತುಂಬಿಸುವ ಕಾಮಗಾರಿ ವೀಕ್ಷಣೆ ವೇಳೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಶಾಸಕ ಪ್ರೋ ಲಿಂಗಣ್ಣ ಕಾಲು ಜಾರಿ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಮಲ್ಲಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಕಾಮಗಾರಿಯನ್ನು ವೀಕ್ಷಣೆ ಮಾಡಲು ನಡೆದುಕೊಂಡು ಹೋಗುತ್ತಿದ್ದಾಗ ಮಣ್ಣಿನ ಹೆಂಡೆ ಮೇಲೆ ಕಾಲಿಟ್ಟು ಆಯತಪ್ಪಿ ಕೆಳಗಿ ಬಿದ್ದಿದ್ದಾರೆ. ತಕ್ಷಣವೆ ಕಾರ್ಯಕರ್ತರು ಶಾಸಕರನ್ನ ಮೇಲೆಬ್ಬಿಸಿದ್ದಾರೆ. ಶಾಸಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ.ಈ ಸಂದಂರ್ಭದಲ್ಲಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್ ಕೂಡಾ ಸ್ಥಳದಲ್ಲಿದ್ದರು.