244 ಕಿ.ಮೀ ಸ್ಪೀಡ್ನಲ್ಲಿ ಬಂದು 'ತೇಜಸ್' ಲ್ಯಾಂಡ್ ಆಗಿದ್ದು ಕೇವಲ 2 ಸೆಕೆಂಡ್ನಲ್ಲಿ!
ಭಾರತೀಯ ನೌಕಾಸೇನೆಗಾಗಿ ನಿರ್ಮಿಸಲಾಗಿರುವ ದೇಶಿ ನಿರ್ಮಾಣದ ಲಘು ಯುದ್ಧ ವಿಮಾನ ತೇಜಸ್ ವಿಶೇಷ ದಾಖಲೆ ಬರೆದಿದ್ದು, ನಿನ್ನೆ ನಡೆದ ಅರೆಸ್ಟೆಡ್ ಲ್ಯಾಂಡಿಂಗ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದೆ. ಗಂಟೆಗೆ ಬರೋಬ್ಬರಿ 244 ಕಿಲೋ ಮೀಟರ್ ಸ್ಪೀಡ್ನಲ್ಲಿ ಬಂದ ತೇಜಸ್ ಎರಡು ಸೆಕೆಂಡ್ನಲ್ಲಿ ರನ್ವೇ ಮೇಲೆ ಲ್ಯಾಂಡ್ ಆಗಿದೆ. ಗೋವಾದಲ್ಲಿ ನಡೆದ ಪ್ರಯೋಗ ಯಶಸ್ವಿಯಾಗಿದ್ದು, ಭಾರತದ ನೌಕಾಪಡೆಗೆ ಮತ್ತೊಂದು ಅಸ್ತ್ರ ಸಿಕ್ಕಿದೆ.