ರಸ್ತೆಗೆ ಬಂದ ಸಂಸಾರದ ವಿರಸ,ಕಣ್ಣೀರು ಸುರಿಸುತ್ತಾ ಲಾಲು ಮನೆಯಿಂದ ಹೊರಬಿದ್ದ ಐಶ್ವರ್ಯ!
ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಪತ್ನಿ ಐಶ್ವರ್ಯ ರಾಯ್ ಇಂದು ಮನೆಯಿಂದ ಕಣ್ಣೀರು ಹಾಕುತ್ತಾ ಹೊರ ನಡೆದಿದ್ದಾರೆ. ರಾಬ್ಡಿ ನಿವಾಸದಿಂದ ಕಣ್ಣೀರು ಸುರಿಸುತ್ತಲೇ ಹೊರ ಬಂದಿರುವ ಅವರು ಕಾರಿನಲ್ಲಿ ಕುಳಿತುಕೊಂಡು ಹೋಗಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಪತ್ನಿ ಐಶ್ವರ್ಯಾಗೆ ವಿಚ್ಚೇಧನ ನೀಡುವ ವಿಚಾರವಾಗಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಮಧ್ಯೆ ಘಟನೆ ನಡೆದಿದೆ.
Last Updated : Sep 13, 2019, 8:28 PM IST