ಸಮುದ್ರ ತೀರದಲ್ಲಿ ಭವ್ಯ ದೇವಾಲಯಗಳ ತೊಟ್ಟಿಲು, ಕಲ್ಲು ಕಲ್ಲಿನಲ್ಲೂ ಮಹಾಭಾರತ ಹೇಳುವ ಮಹಾಬಲಿಪುರಂ! - ಪ್ರಧಾನಿ ನರೇಂದ್ರ ಮೋದಿ
ತಮಿಳುನಾಡಿನ ಮಹಾಬಲಿಪುರಂ ಸಮುದ್ರ ತೀರದಲ್ಲಿರುವ ವಿಶಿಷ್ಟ ದೇವಾಲಯ. ಶಿವ, ಕೃಷ್ಣ, ವಿಷ್ಣು, ದುರ್ಗೆ ಸೇರಿದಂತೆ ವಿವಿಧ ದೇವರ ನಲೆಬೀಡಾಗಿರುವ ಭವ್ಯ ವಿಶ್ವಪಾರಂಪರಿಕ ತಾಣದಲ್ಲಿ ಗುಹೆ, ರಥ, ಮಂಟಪ ಸೇರಿದಂತೆ ಪಂಚಪಾಂಡವರ ಕಲ್ಲಿನ ರಥಗಳು, ರಥದ ಮಾದರಿ ದೇವಾಲಯಗಳಿವೆ. ಕೋರಮಂಡಲ ಸಮುದ್ರ ತೀರ ಪ್ರದೇಶದಲ್ಲಿರುವ ಈ ದೇವಾಲಯಗಳ ಸಮೂಹವನ್ನು ಪಲ್ಲವ ರಾಜವಂಶಸ್ಥರು 7 ಮತ್ತು 8ನೇ ಶತಮಾನದಲ್ಲಿ ನೈಸರ್ಗಿಕ ಬಂಡೆಗಳನ್ನು ಕೊರೆದು ಕಟ್ಟಿಸಿದ್ದಾರೆ. ಆ ದೇವಾಲಯ ಹೇಗಿದೆ? ಎಂಬುದನ್ನು ನೀವೂ ಕಣ್ತುಂಬಿಕೊಳ್ಳಿ.