ವಿಶೇಷ ತನಿಖಾ ತಂಡದ ಮುಖ್ಯಸ್ಥ ತಿವಾರಿ ಬಿಹಾರಕ್ಕೆ ವಾಪಸ್ - ಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ತನಿಖೆ
ಪಾಟ್ನಾ (ಬಿಹಾರ): ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ, ವಿಶೇಷ ತನಿಖಾ ತಂಡದ ಮುಖ್ಯಸ್ಥ ಐಪಿಎಸ್ ವಿನಯ್ ತಿವಾರಿ ಬಿಹಾರಕ್ಕೆ ವಾಪಸ್ ಮರಳಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಗಾಗಿ ಮುಂಬೈಗೆ ತೆರಳಿದ್ದರು. ಆದರೆ ಬಿಎಂಸಿ ಅಧಿಕಾರಿಗಳು ಅವರನ್ನ ಕ್ವಾರಂಟೈನ್ಗೆ ಒಳಪಡಿಸಿದ್ದರು. ಈ ಬಗ್ಗೆ ಮಾತನಾಡಿದ ತಿವಾರಿ ಅವರು, ಕೇವಲ ಒಬ್ಬ ವ್ಯಕ್ತಿಯನ್ನ ಕ್ವಾರಂಟೈನ್ಗೆ ಒಳಪಡಿಸಿಲ್ಲ ಬದಲಾಗಿ ಸಂಪೂರ್ಣ ತನಿಖೆಯನ್ನೇ ಕ್ವಾರಂಟೈನ್ಗೆ ಒಳಪಡಿಸಿದಂತಾಗಿದೆ ಎಂದು ಬಿಎಂಸಿ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ತನಿಖೆ ಸರಿಯಾದ ಹಾದಿಯಲ್ಲಿದೆ ಎಂದು ವಿನಯ್ ತಿವಾರಿ ಇದೇ ವೇಳೆ ಸ್ಪಷ್ಟಪಡಿಸಿದರು. ಪಾಟ್ನಾದಿಂದ ಮುಂಬೈಗೆ ಎಫ್‌ಐಆರ್ ವರ್ಗಾಯಿಸಲು ಕೋರಿ ರಿಯಾ ಚಕ್ರವರ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಆಗಸ್ಟ್ 11ರಂದು ನಡೆಯಲಿದೆ.