'ಈಟಿವಿ ಭಾರತ' ಕಚೇರಿಗೆ ತಲೈವಾ ದಿಢೀರ್ ಎಂಟ್ರಿ, ರೊಬೊ ಕಂಡು ಸಿಬ್ಬಂದಿ ಪುಳಕ.. - ಈಟಿವಿ ಭಾರತಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಭೇಟಿ
ಹೈದರಾಬಾದ್: ಪದ್ಮಭೂಷಣ ಪರಸ್ಕೃತ, ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಇಂದು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ 'ಈಟಿವಿ ಭಾರತ' ಕಚೇರಿಗೆ 'ಕಬಾಲಿ' ದಿಢೀರ್ ಭೇಟಿ ನೀಡಿದರು. ಆರ್‌ಎಫ್‌ಸಿಯಲ್ಲಿ ತಮ್ಮ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ 13 ಭಾಷೆಗಳಲ್ಲಿ ಸುದ್ದಿ ಬಿತ್ತರಿಸುವ 'ಈಟಿವಿ ಭಾರತ' ಕಚೇರಿಗೆ ರಜನಿ ಭೇಟಿ ನೀಡಿದರು. ಈ ವೇಳೆ ದೇಶದ ವಿವಿಧ ರಾಜ್ಯಗಳ ಸುದ್ದಿ ಒಟ್ಟುಗೂಡಿಸಿ ಬಿತ್ತರಿಸುವ ವಿವಿಧ ಡೆಸ್ಕ್ಗಳನ್ನು'ಎಂದಿರನ್'ವೀಕ್ಷಿಸಿದರು. ಈ ವೇಳೆ ನಿತ್ಯ ತಮ್ಮ ಕರ್ತವ್ಯದಲ್ಲೇ ನಿರತರಾಗಿರುತ್ತಿದ್ದ ಸಿಬ್ಬಂದಿ 'ಶಿವಾಜಿ'ರನ್ನು ನೋಡಿ ಸಂತಸಗೊಂಡರು. ಇದರೊಂದಿಗೆ ಸೂಪರ್ ಸ್ಟಾರ್ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
TAGGED:
ಸೂಪರ್ ಸ್ಟಾರ್ ರಜನಿಕಾಂತ್